Monday, July 7, 2014

ಕನಸು

ಆಷಾಡ ಮಾಸದ ರಬಸದ ಗಾಳಿಯು..
ಸೊಂಪಾಗಿ ಎನ್ನ ಸೋಕಿದ ಭಾವ..
ನಲ್ಲ.. ನಿನ್ನನೆ ನೆನೆಯುತ ನಾ ಮೈ ಮರೆತೇನೇನೋ..
ನಿನಗೂ ಹೀಗೆಲ್ಲ ಅನುಭವವೇ,,?? ತಿಳಿಸೆಯ ನೀನು..

ತಂಪಾದ ಗಾಳಿಯ ಇಂಪಾದ ಸೊಗಸಲಿ..
ಚಿಟ ಪಟ ಮಳೆ ಹನಿ.. ನೀ ಬಂದೆ..
ಮೌನದ ಮೊರೆಯಲಿ ನಾ ನನ್ನೊಳಗೆ ನಗುವಾಗ..
ಸೋಜಿಗದ ಹಾಗೆ ನೀ ನನ್ನ ಮೈ ನವಿರಿದೆ..

ಕನಸೋ ಕಲ್ಪನೆಯೋ.. ಎಲ್ಲವೂ ನೀನೇ..
ಮನಸಿನ ಮನೆಯಲ್ಲಿ ನಿನ್ನದೇ ದ್ಯಾನ..
ಎದುರಲ್ಲಿ ಮುನಿಸಿದ್ದರು.. ಕಂಗಳಲಿ ಒಲವಿದೆ..
ನೀ ಆದ ಅರಿತಾಗ ನಾನಂದು ಧನ್ಯೆ..

ಕನಸುಗಳು ಹಲವಾರು..ಮನುಜನ ವಾಸ್ತವವೇ ಕಿಂಚು..
ಇರುವ ಆ ಕಿಂಚು ವೇಳೆಯಲಿ.. ಬದುಕೋಣವೇನು..
ಕಂಡ ಕನಸ ನನಸಾಗಿಸಲು.. ಒಂದೆಜ್ಜೆ ಮುಂದರಿಯಲಿ..
ಇಟ್ಟ ಪಣವ ಮೆಟ್ಟು ನಿಲ್ಲೋಣ..
Friday, February 8, 2013

ನಲ್ಲೇ ನಿನಗಾಗಿ ನ ಬರೆದ ಓಲೇ


ಮಿನುಗುವಾ ನಕ್ಷತ್ರಕ್ಕೆ..
ಸಾಟಿ ಯಾರಿಲ್ಲ..

ನಲ್ಲೇ ನಿನ್ನ ಮೊಗ.. ಚಂದಿರನ ಬಿಂಬ..
ಆ ನಿನ್ನ ನಯನ.. ಕೊಲ್ಲುತಿದೆ ನನ್ನ...
ಬಚ್ಚಿಟ್ಟ ಕನಸು..ಎದುರಿಗೆ ನಿಂತಂತೆ..
ಮನದ ಭಾರ.. ಅರಿಯದೆ ಇಳಿದಂತೆ...

ಕಿರು ನಗೆಯು ಆ ನಿನ್ನ ಚಂಡುತಿಯಲಿ ಮೂಡಲು..
ಮರೆವೆನು ನಾನು ನನ್ನ್ನೇ...
ಪಿಸುಗುಡುವ ಆ ಮಾತು
ಕಂಪಿಸಿದಾಗ ಶ್ರವಣದಲಿ.. ಅರಿಯದೆ ಅರಳುವುದು ಈ ನನ್ನ ಮೊಗವು..

ಎತ್ತ ನಡೆದರು ನಿನ್ನನೇ ಕಾಣುವೆ..
ಸ್ನೇಹಿತರ ಗದ್ದಲದಲೂ ನಿನ್ನ ದನಿಯನೇ ಹುಡುಕುತ..
ಅಲೆಮಾರಿ ನಾನು ಹುಟ್ಟಿನಿಂದ..
ಅಲೆಯುವೆ ನಿನ್ನ ನೆನಪಲೆ ನಾನು...

ಪ್ರೀತಿಸುವೆ ನಿನ್ನ ಮನದಾಳದಿಂದ ..
ನೀ ಅರಿಯೆ ನನ್ನ ಮನದಾಳದ ಮಾತಾ..
ಅರಿತು ಅರಿಯದಾಗೇ ನಟಿಸುವ ಭಾವ ನಿನ್ನದು..
ಮೌನಕೆ ತಲೆದೂಗಿ ಕಾಡುವೆ ನನ್ನನು..

ಪ್ರೀತಿಸುವ ಭಾವಕೆ.. ಸಹನೆ  ಆಭರಣ..
ಸಹನೆಯ ಈ ಭಾವ ಎತ್ತ ಕರೆದೋದಿದೆ ನಿನ್ನ..
ಇರುವೆಯಾ ನನ್ನಲ್ಲಿ..ನನ್ನವಳಾಗಿ..
ಅಲೆಮಾರಿ ಜೀವಕೆ.. ಮಿನುಗುವಾ ನಕ್ಷತ್ರವಾಗಿ..
Wednesday, July 4, 2012

ಮುಗುಳ್ನಗೆ ಮನದಲಿ

ಕಟ್ಟಿದ ಕನಸಲ್ಲಿ..ಕೊಂಚ ನಗುವುಂಟು..
ಕಣ್ಣಿನ ಭಾಷೆಯಲ್ಲಿ.. ನೂರಾರು ಭಾವಗಳ ನೆಲೆಯಿದೆ..
ಕಣ್ಮರೆಯದ ಮರೀಚಿಕೆಯೂ.. ಎದುರಲ್ಲಿ ನಿಂತಂತೆ..
ಕನ್ ಸೆಳೆದ ರೀತಿ ಮನಸಲ್ಲಿ ಮರೆಯಾದಂತೆ..

ಕತ್ತಲೆ ಕವಿದಾಗೇ... ಕನ್ ತೆರೆದಾಗೇ..
ಎಲ್ಲೋ ಏನೋ ಮರೆಯಾದ ಮರೀಚಿಕೆಯಾಗೇ..
ಏನೋ ಅರಿಯಾಲಾಗಾದ ತಳಮಳ ಮನದಲ್ಲಿ..
ಕೊಂಚ ನಿಟ್ಟುಸಿರು ಅರಿಯದೆ ನನ್ನ ತೊರೆದು ನಡೆದಿದೆ.

ಉಲ್ಲಾಸದ ಚಿಲುಮೆ.. ಮೂಡಿತು ಮನದಲಿ..
ಕಳೆದು ಹೋಯಿತು ಎಲ್ಲೋ ದುಗುಡ..
ಕವನದ ಸಾಲಲಿ..
ಮುಗುಳ್ನಗೆ ಮನದಲಿ..ತಿಳಿಯದೇ ಸುಳಿಯಿತು..

Wednesday, February 29, 2012

ನಿನಗಾಗಿ ನಾ ಕಾದಿರುವೆ.. :)


ಮರೆತು ಹೋಗಿಧ್ಧೆ ನಗುವಿನ ಕನಸನ್ನು..
ಕಲ್ಲಾಗಿ ಕುಳಿತ್ತಿದೆ ನನ್ನಲ್ಲೇ ನಾನು..
ಎತ್ತಲಿಂದ ನೀ ಬಂದೆಯೋ ನಾ ಅರಿಯೆ..
ನಿನ್ನ ನಗುವಿನಲ್ಲೇ ಬೆರೆತೊದೆ ನಾನು..

ಸೂಜಿ ಮೊನೆಯಲ್ಲೂ ನಿನ್ನ ನೆನಪು...
ಕತ್ತಲಲ್ಲೂ ನಿನ್ನ ಸನಿಹ..ಏನೋ ಮಜವಾಗಿಧೆ..
ಹೇಳಲಾಗದ ಭಾವನೆ...ಅರಿಯಲಾಗದ ಮೌನ..

ನಗುವೆ ನನ್ನೊಳಗೆ ನಾನು..
ಕಳೆದೋಗೂವೆ ಎನ್ನ ಕಂಗಳಲೇ..
ಎಂದಿಗೆ ನೀ ಬರುವೆ....
ನಿನಗಾಗಿ ನಾ ಕಾದಿರುವೆ.. :)

Monday, November 14, 2011

ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ

ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ದಿನ ರಾತ್ರಿ ನಿದ್ಧೆ ಇಲ್ಲ..
ಬೆಳಗ್ಗೆ ಎದ್ದು ರೆಡೀ ಆಗಿ ಆಫೀಸ್ ಕಡೆ ಹೋಗ್‌ಬೇಕಲ್ಲ..
ಆಫೀಸ್ನಲ್ಲಿ ಬಂದು ಕೂತ್ರೆ..
ಸಿಸ್ಟಮ್ ನಲ್ಲಿ ಯಾವ ವೆಬ್‌ಸೈಟ್ ನು ಸಾತ್ ನೀಡೋದಿಲ್ಲ..
ಹಳೆ ಕಂಪನೀ ನಲ್ಲಿ..
ಸ್ಯಾಲರೀ ಕಮ್ಮಿ ಆದ್ರೂ ಓಕೇ..
ಕಾಲಿ ಅಂತೂ ನಾವ್ ಇರ್ಲಿಲ್ವಲ್ಲ..
ಎಲ್ಲಿ ಒಂಧು ವರ್ಷ ಆಧಮೇಲೆ ಹಳೆ ವಸ್ತು ಆಗೋದ್ವಲ್ಲ..
ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ಐ ಟೀ ಫೀಲ್ಡ್ ನಲ್ಲಿ ಇಂಥ ತಲೆ ನೋವು ಕಾಯಂಮು...

ಕಂಪನೀ ಸೇರಿ ವರ್ಷ ಆತು...
ಹೈಕ್ ಸುಧ್ಧಿ ಇಲ್ವೇ ಇಲ್ಲ..
ನಂಗಿನ್ನಾ ಚಿಕ್ಕೊರೇಲ್ಲ ಈಗ್ಗ ಮುಗ್ಗ ಹೈಕ್ ತಗೊಂಡ್ರಲ್ಲ..
ಕೈಯಲ್ಲಿ ಕೆಲ್ಸಾ ಕಡ್ಮೆ..
ಮನ್ಸು ಶಾಂತಿ ಕಳ್ಕೊತಲ್ಲ..
ಸೆಲ್ಫ್ ಸ್ಟಾರ್‌ಟರ್ ಆಗಿ ಏನಾದ್ರೂ ಕಲಿ ಅಂತ..
ದಿನ ಮ್ಯಾನೇಜರ್ ಬೆನ್ನಿಂಧೆ ಬಿಧವ್ನಾಲ್ಲ..
ಯಾರಿಗೆಳೋಣ ನಮ್ಮ ಪ್ರಾಬ್ಲಮ್-ಉ
ಅಪ್ಪರಾನೆ ಹೇಳ್ತೀನಿ ಕೇಳಿ..
ನಂಗೆ ಸೆಲ್ಫ್ ಸ್ಟಾರು ತುಂಬಾ ಪ್ರೊಬ್ಳೇಮ್ಮು..

ತುಂಭ ಬುಧ್ಧಿವಂತ ಇಧ್ಧೆ ನಾನು..
ಕಂಪನೀ ಜಾಯ್ನ್ ಆಧಾಗ..
6 ತಿಂಗಳು ಬೆಂಚ್‌ನಲ್ಲಿ ಕೂರ್ಸಿ...
7ನೇ ತಿಂಗಳಲ್ಲಿ ಕೊಟ್ರೂ ಕೈಗೆ ಒಂಧು ಹೊಸ ಪ್ರಾಜೆಕ್ಟ್ ಡಾಕ್ಯುಮೆಂಟು..
ಫುಲ್ಲ್ ತೀರ್ವಾಕಿ ನೋದ್ಧೆ... ತಲೆ ಒಳಗೆ ಹುಳ ಬಿತ್ತು..
ಅರ್ಥ ಏನು ಆಗ್ಲೇ ಇಲ್ಲ.. ಆ ಡಾಕ್ಯುಮೆಂಟು..
ಎವಾಗ ಗೊತ್ತೈತು ನನ್ನ ಬುಧ್ಧಿವಂತಿಕೆ..
ಯಾರಿಗೆಳೋಣ ನಮ್ಮ ಪ್ರಾಬ್ಲಮ್-ಉ
 ಐಟೀ ನಲ್ಲಿ ಇರೋ ಮ್ಯಾನೇಜರ್ಸ್ ನೇ ಭಯಾನಕ್ ಗರಮ್ಮು..

ಸೆಲ್ಫ್ ಸ್ಟಾರ್ಟ್ ಮೂಲೀಗಾಯ್ತ...
ಮನ್ಸಿನ್ ನೆಮ್ಧಿ ಹಾಳಾಗೊತು..
ಮೈಂಡ್ ಸ್ಟೇಟಸ್ ಬ್ಲ್ಯಾಂಕ್ ಆಗಿ..
ಕೊನೆಗೆ ಏನಾತು ಅಂತ ನಾನು ಹೇಗೆ ಹೇಳಿ..
ದಿನ ಸಿಸ್ಟಮ್ ನೋಡಿ ನೋಡಿ..
ಸಿಸ್ಟಮ್ ಕೂಡ ಕೋಪ ಬಂತು..
ಮನೆ ಕಡೆ ಮರ್ಯಾಧೆ ಹೋರ್ಡು ಅಂತ ಅದು ಮಾತಡೆ ಬಿಡ್ತು..
ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ಪ್ರಾಜೆಕ್ಟ್ ಗಳು ಆಧ್ವೂ ಕನಸಿನ ಡೈಯಗ್ರ್ಯಾಮ್ಯೂ...

Wednesday, November 9, 2011

ಆಸೆಯೆ ದು:ಖಕ್ಕೆ ಮೂಲ.. :)ಅರಿಯದೆ ಮೂಡಿತ್ತು..
ಮನದಲ್ಲೆಲ್ಲೋ ಸಂತಸ..
ತಿಳಿಯದೇ ಕಾಡಿತ್ತು ...
ಮುಂದಿನ ಜೀವನ..

ಸುಮ್ಮನೇ ನಗಬೇಕೆಂಧೆ..
ಗೊತ್ತಾಗದೆ ಅಳಲಾರಂಬಿಸಿಧೆ..
ಕ್ಷಣಿಕ.. ಜೀವನವೇ ಸರಿ..
ಬದುಕುವುದು ತುಂಬಾನೆ ಭಾರ...


ಕನಸೇ ಎಷ್ಟೋ ಚೆಂದ..
ಅಲ್ಲೆಲ್ಲ ನನ್ನ ಖುಷಿಯೆ...
ಖುಷಿ ಮಾತ್ರ ಬದುಕಾದರೆ..
ದು:ಖದ ಛಾಯೆ ಕಾಣೋದೆಲ್ಲಿ..

ಬದುಕುವುದು ಅನಿವಾರ್ಯವೇ ಸರಿ..
ಆಸರೆಗೆ ಯಾರಿಲ್ಲದಾಗ...
ಒಂದ್ಎಜ್ಜೆ ಕೂಡ..
ಅರಿಯಲಾಗದ ಭಾರ..
Monday, October 31, 2011

ನಿಜವೇ ನಿನ್ನ ಆಗಮನ ??

ಸದ್ದು ಗದ್ದಲವಿಲ್ಲದೆ ...
ಯಾರಿಗೂ ಹೇಳದೆ...
ನಿಮಿತ್ತ ನಗುವು ಯೆನ್ನಲ್ಲೆಕೊ ಮೂಡಿದೆ..

ಸಂತಸದ ಸಿರಿ ಎಂತ ದಿನವೆಂಧು..?
ಮುಗುಳ್ನಗೆಯ ಛಾಯೆ ಮನಸಲ್ಲಿ..
ಹೇಳಲಾಗದ ಭಾವನೆ ಕಂಗಳಲ್ಲಿ..

ಆ ಕ್ಷಣದಲ್ಲಿ ಏನಾಯಿತೋ ನಾ ಅರಿಯೆ..
ನೀ ಯೆನ್ನೆದುರಿಗೆ ನಡೆದೆ...
ಎನ್ ಕಣ್ಣಲ್ಲಿ ಸಂತಸದ ನಗೆ ಹರಿಸಿ..

ಏನೋ ಏಕೋ ನಾ ಅರಿಯೆ..
ಈ ನಗುವಿಗೆ ಕಾರಣ .. :)
ನಿಜವೇ ನಿನ್ನ ಆಗಮನ... :)