Monday, November 14, 2011

ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ

ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ದಿನ ರಾತ್ರಿ ನಿದ್ಧೆ ಇಲ್ಲ..
ಬೆಳಗ್ಗೆ ಎದ್ದು ರೆಡೀ ಆಗಿ ಆಫೀಸ್ ಕಡೆ ಹೋಗ್‌ಬೇಕಲ್ಲ..
ಆಫೀಸ್ನಲ್ಲಿ ಬಂದು ಕೂತ್ರೆ..
ಸಿಸ್ಟಮ್ ನಲ್ಲಿ ಯಾವ ವೆಬ್‌ಸೈಟ್ ನು ಸಾತ್ ನೀಡೋದಿಲ್ಲ..
ಹಳೆ ಕಂಪನೀ ನಲ್ಲಿ..
ಸ್ಯಾಲರೀ ಕಮ್ಮಿ ಆದ್ರೂ ಓಕೇ..
ಕಾಲಿ ಅಂತೂ ನಾವ್ ಇರ್ಲಿಲ್ವಲ್ಲ..
ಎಲ್ಲಿ ಒಂಧು ವರ್ಷ ಆಧಮೇಲೆ ಹಳೆ ವಸ್ತು ಆಗೋದ್ವಲ್ಲ..
ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ಐ ಟೀ ಫೀಲ್ಡ್ ನಲ್ಲಿ ಇಂಥ ತಲೆ ನೋವು ಕಾಯಂಮು...

ಕಂಪನೀ ಸೇರಿ ವರ್ಷ ಆತು...
ಹೈಕ್ ಸುಧ್ಧಿ ಇಲ್ವೇ ಇಲ್ಲ..
ನಂಗಿನ್ನಾ ಚಿಕ್ಕೊರೇಲ್ಲ ಈಗ್ಗ ಮುಗ್ಗ ಹೈಕ್ ತಗೊಂಡ್ರಲ್ಲ..
ಕೈಯಲ್ಲಿ ಕೆಲ್ಸಾ ಕಡ್ಮೆ..
ಮನ್ಸು ಶಾಂತಿ ಕಳ್ಕೊತಲ್ಲ..
ಸೆಲ್ಫ್ ಸ್ಟಾರ್‌ಟರ್ ಆಗಿ ಏನಾದ್ರೂ ಕಲಿ ಅಂತ..
ದಿನ ಮ್ಯಾನೇಜರ್ ಬೆನ್ನಿಂಧೆ ಬಿಧವ್ನಾಲ್ಲ..
ಯಾರಿಗೆಳೋಣ ನಮ್ಮ ಪ್ರಾಬ್ಲಮ್-ಉ
ಅಪ್ಪರಾನೆ ಹೇಳ್ತೀನಿ ಕೇಳಿ..
ನಂಗೆ ಸೆಲ್ಫ್ ಸ್ಟಾರು ತುಂಬಾ ಪ್ರೊಬ್ಳೇಮ್ಮು..

ತುಂಭ ಬುಧ್ಧಿವಂತ ಇಧ್ಧೆ ನಾನು..
ಕಂಪನೀ ಜಾಯ್ನ್ ಆಧಾಗ..
6 ತಿಂಗಳು ಬೆಂಚ್‌ನಲ್ಲಿ ಕೂರ್ಸಿ...
7ನೇ ತಿಂಗಳಲ್ಲಿ ಕೊಟ್ರೂ ಕೈಗೆ ಒಂಧು ಹೊಸ ಪ್ರಾಜೆಕ್ಟ್ ಡಾಕ್ಯುಮೆಂಟು..
ಫುಲ್ಲ್ ತೀರ್ವಾಕಿ ನೋದ್ಧೆ... ತಲೆ ಒಳಗೆ ಹುಳ ಬಿತ್ತು..
ಅರ್ಥ ಏನು ಆಗ್ಲೇ ಇಲ್ಲ.. ಆ ಡಾಕ್ಯುಮೆಂಟು..
ಎವಾಗ ಗೊತ್ತೈತು ನನ್ನ ಬುಧ್ಧಿವಂತಿಕೆ..
ಯಾರಿಗೆಳೋಣ ನಮ್ಮ ಪ್ರಾಬ್ಲಮ್-ಉ
 ಐಟೀ ನಲ್ಲಿ ಇರೋ ಮ್ಯಾನೇಜರ್ಸ್ ನೇ ಭಯಾನಕ್ ಗರಮ್ಮು..

ಸೆಲ್ಫ್ ಸ್ಟಾರ್ಟ್ ಮೂಲೀಗಾಯ್ತ...
ಮನ್ಸಿನ್ ನೆಮ್ಧಿ ಹಾಳಾಗೊತು..
ಮೈಂಡ್ ಸ್ಟೇಟಸ್ ಬ್ಲ್ಯಾಂಕ್ ಆಗಿ..
ಕೊನೆಗೆ ಏನಾತು ಅಂತ ನಾನು ಹೇಗೆ ಹೇಳಿ..
ದಿನ ಸಿಸ್ಟಮ್ ನೋಡಿ ನೋಡಿ..
ಸಿಸ್ಟಮ್ ಕೂಡ ಕೋಪ ಬಂತು..
ಮನೆ ಕಡೆ ಮರ್ಯಾಧೆ ಹೋರ್ಡು ಅಂತ ಅದು ಮಾತಡೆ ಬಿಡ್ತು..
ಯಾರೀಗ್ ಹೇಳೋಣ ನಮ್ಮ ಪ್ರಾಬ್ಲಮ್-ಉ
ಪ್ರಾಜೆಕ್ಟ್ ಗಳು ಆಧ್ವೂ ಕನಸಿನ ಡೈಯಗ್ರ್ಯಾಮ್ಯೂ...

Wednesday, November 9, 2011

ಆಸೆಯೆ ದು:ಖಕ್ಕೆ ಮೂಲ.. :)



ಅರಿಯದೆ ಮೂಡಿತ್ತು..
ಮನದಲ್ಲೆಲ್ಲೋ ಸಂತಸ..
ತಿಳಿಯದೇ ಕಾಡಿತ್ತು ...
ಮುಂದಿನ ಜೀವನ..

ಸುಮ್ಮನೇ ನಗಬೇಕೆಂಧೆ..
ಗೊತ್ತಾಗದೆ ಅಳಲಾರಂಬಿಸಿಧೆ..
ಕ್ಷಣಿಕ.. ಜೀವನವೇ ಸರಿ..
ಬದುಕುವುದು ತುಂಬಾನೆ ಭಾರ...


ಕನಸೇ ಎಷ್ಟೋ ಚೆಂದ..
ಅಲ್ಲೆಲ್ಲ ನನ್ನ ಖುಷಿಯೆ...
ಖುಷಿ ಮಾತ್ರ ಬದುಕಾದರೆ..
ದು:ಖದ ಛಾಯೆ ಕಾಣೋದೆಲ್ಲಿ..

ಬದುಕುವುದು ಅನಿವಾರ್ಯವೇ ಸರಿ..
ಆಸರೆಗೆ ಯಾರಿಲ್ಲದಾಗ...
ಒಂದ್ಎಜ್ಜೆ ಕೂಡ..
ಅರಿಯಲಾಗದ ಭಾರ..




Monday, October 31, 2011

ನಿಜವೇ ನಿನ್ನ ಆಗಮನ ??

ಸದ್ದು ಗದ್ದಲವಿಲ್ಲದೆ ...
ಯಾರಿಗೂ ಹೇಳದೆ...
ನಿಮಿತ್ತ ನಗುವು ಯೆನ್ನಲ್ಲೆಕೊ ಮೂಡಿದೆ..

ಸಂತಸದ ಸಿರಿ ಎಂತ ದಿನವೆಂಧು..?
ಮುಗುಳ್ನಗೆಯ ಛಾಯೆ ಮನಸಲ್ಲಿ..
ಹೇಳಲಾಗದ ಭಾವನೆ ಕಂಗಳಲ್ಲಿ..

ಆ ಕ್ಷಣದಲ್ಲಿ ಏನಾಯಿತೋ ನಾ ಅರಿಯೆ..
ನೀ ಯೆನ್ನೆದುರಿಗೆ ನಡೆದೆ...
ಎನ್ ಕಣ್ಣಲ್ಲಿ ಸಂತಸದ ನಗೆ ಹರಿಸಿ..

ಏನೋ ಏಕೋ ನಾ ಅರಿಯೆ..
ಈ ನಗುವಿಗೆ ಕಾರಣ .. :)
ನಿಜವೇ ನಿನ್ನ ಆಗಮನ... :)

Friday, October 21, 2011

ಹ್ಯಾಪೀ ದಿವಾಲಿ :) :)

ಹರುಷ ನಲಿವಿನ ಆಗಮನ
ಈ ದೀವಲಿಗೆ ಸಂದರ್ಭದಲಿ
ಮನಸಿನ ನೋವಿನ ಭಾರ ಇಳಿಯಲಿ
ಆ ಮಿಂಚಿನ ದೀವಳಿಗೆಯ ಕಾಂತಿಯಲಿ

ದೀಪದ ಕಿರಣಗಳ ಕಾಂತಿ ನೆಲೆಸಲಿ
ಎಲ್ಲರ ಕಣ್ಣಿನ ಅಂಚಲಿ...
ಕತ್ತಲೆಯ ಕುರುಹು ಮರೆಯಾಗಲಿ..
ಬೆಳಕಿನ ಸ್ಪರ್ಶದಲಿ.. :) :)

Tuesday, October 18, 2011

ಮನಸು ಸೈಲೆಂಟ್ ಆದಾಗ... ಕೆಲ್ಸಾ ಇಲ್ಧಾಗ.. :)

ಮನಸು ಒಲ್ಲದ ನಗೆ ..
ಮೌನವಾದ ಮಾತು..
ಕನಸಲ್ಲಿ ಕಂಡ ಮನಸಿನ ಮೌನದ ಛಾಯೆ..
ಯಾರಲ್ಲಿ ಕಂಡಿದ್ದು ನಾ ಅರಿಯೆ..
ಮರೆಯಾದಾಗ ಮನಸಲ್ಲೆಲ್ಲೋ ನೋವಾದ ಭಾವನೆ...
ಕಲ್ಪನೆಯಲ್ಲೂ ಕಂಡ ನೆನಪಿನ ಆಸರೆ..
ಕಣ್ಣು ತೆರೆದಾಗ ಭಾಸವಾಧ ಮನಸ್ಸಿನ ಭಾರ...
"ಹೊರಲಾಗದು ಜೀವನದ ಮೌನದ ನಗೆಯ ದು:ಖದ ಹೊರೆಯ..."


ನಗುವಾಗ ಯಾರಿಲ್ಲ ಮನಸಲ್ಲಿ...
ಅಳುವಾಗ ಎತ್ತಲಿಂದ ಬಂದರೋ...
ಕಳೆದು ಹೋದ ಮಂದಿ...
ನನಗೆ ಅರಿವೆ ಇಲ್ಲ ಅವರ ಆಗಮನ...
ಅಳುವಿನ ಜೊತೆಗೂಡಿ ಅವರ ನೆನಪು...
ಹರಿದಾಡಿತು ಕಣ್ಣಿರ ಹನಿಯಾಗಿ...

Tuesday, August 16, 2011

ಪಾಪಿ ಜನ್ಮ

ಜನ ಹೇಳ್ತಾರೆ ಕೊನೇ ವರೆಗೂ ಇರ್ತೀನಿ ನಿನ್ ಜೊತೆ ನಿನ್ ನೆರಳಾಗಿ ಅಂತ
ದಿನ ಕಾಳಿೇತ ಹೋಧಾಂಗೆ ಗೋತಾಗೋಧು ಏನು ಉಳಿತು ಕೊನೆಗೆ ನಂ ಜೊತೇಲಿ ಅಂತ...
ಅಂಗಂತಾ ಹುಡುಕೋಕ್ ಹೋಗ್ಬೆಡಿ... ಹ ಹ
ಯಾಕಂದ್ರೆ ಏನು ಜೊತೆಗಿಲ್ಲ...
ಕೊನೆಗೆ ಉಸಿರು ಕೂಡ ಬಿಟ್ಟು ಹೋಗಿರತೆ..
ಪಾಪಿ ಮಾನವ ಜನ್ಮ..
ಬಧ್ಕಿಧ್ಧಗ ಮಾಡಿದ್ೆಲ್ಲ ತಪ್ಪು ಅನ್ನಥೆ
ಸಾಯೋ ಟೈಮ್ ಬಂಧಾಗ ಬಿಟ್ ಹೋಗ್ಬೆಡ ಅಂತ ಅಂಗಲಾಚುತ್ತೆ.

Wednesday, July 27, 2011

Be Happy.. NO BP... :)

NO good old memories to remember..
No good old frens who are remembered..
nothing happening life to0..where i can feel happy..
still i can't hate this life.. because...
Zindagi na milegi dubara.. :)


Jiyo ji barke..
yevarunna yenti..Yevvaru lena yenti..

yevaremanna nijaithi unte chaalamma..
no worries.. be happies.. :P

Tuesday, July 26, 2011

ಕಲ್ಪನೆಯ ಕಡಲಲ್ಲಿ

ಕಲ್ಪನೆಯ ಕಡಲಲ್ಲಿ
ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ
 
ರಾತ್ರಿಯ ಸೊಬಗಿನ
ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ
ಓ ನನ್ನ ಕಂದಮ್ಮ
ನಿನ್ನ ಚೆಲುವ ನಾ ಹೇಗೆ ಬರೆಯಲಿ
ಈ ನನ್ನ ಪುಟ್ಟ ಕವನದಲಿ

ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ
ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ
ಕೂಸೆ ನೀ ನನ್ನ ಕನಸು..
ನಗುತಲಿರು ನೀ ಎಂಧೂ
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು

ಕಂಬನಿಯ ಹನಿಯಲ್ಲಿ

ತುಂತುರು ಹನಿಯ
ಮಿಂಚು ಗುಡುಗಿನ ಮಧ್ಯೆ ಸದ್ದಿಲದೆ ಬಂದ ಆ ಕ್ಷಣ..
ನೆನಪಾಧೆ ನೀನು..

ತಣ್ಣನೆ ಗಾಳಿಯ ನಡುವೆ..
ರೋಮಗಳೆಲ್ಲ ಗಧಿರೆಧ್ಧು ನಿಂತಾಗ..
ನೆನಪಾಧೆ ನೀನು..


ಕಂಬನಿಯು ಮೌನಕ್ಕೆ ಮೊರೆ ಹೋಗುವಾಗ
ಎದುರು ಕಂಡ ಪುಟ್ಟ ಕಂದಮ್ಮನ ನಗು ಕಂಡಾಗ
ನೆನಪಾಧೆ ನೀನು

ಹೀಗೇಕೆ ಓ ಪ್ರಾಣವೇ ಕೊಲ್ಲೂವೆ ಯೆನ್ನನೂ
ಪ್ರತಿ ನೆನಪಲ್ಲೂ ಎನ್ ಮೊಗದಲ್ಲಿ ಅರೆ ಕ್ಷಣದಲ್ಲಿ ನಗೆ ತರಿಸಿ
ಮರು ಕ್ಷಣದಲ್ಲಿ ಕಂಬನಿಯ ಸುರಿಸುವೆ
ಆ ಕಂಬನಿಯ ಹನಿಯಲ್ಲೂ ನೆನಪಾಧೆ ನೀನು.. :)