Tuesday, February 5, 2019

ಜನನ .. ಜೀವನ..

ಕಣ್ಣೆದುರಿಗೆ ಕಾಣೋದೆ ನಿಜ ಅಲ್ಲ..
ಇನ್ನ ನಾನ್ ಹೇಳಿದ್ ಎಲ್ಲಿ ತಿಳಿತದೋ ಮಗ..
ಕಲ್ಮಶಕೆ ಮತ್ತೆಲ್ಲಿ ಮರಣ..
ಸತ್ಯಕೆ ಪರೀಕ್ಷೆಯೇ ಎಂದಿಗೂ..


ನಿನ್ನ ಒಡನಾಟ ಅವಳಲ್ಲೇ ಇದ್ದರೆ..
ಮತ್ತೋರ್ವಳ ನಂಟೇಕೋ..
ಜೀವನದ ಹಾದಿಯಲ್ಲಿ
ಜನನ.. ಜೀವನ.. ಖಚಿತ ಮರಣ ನಿಶ್ಚಿತ..

ಜನಿಸಿದ ಭೂಮಿ ಮರುಗಾಡಾಗಿದೆ ಎಂದು..
ಜೀವನವ ಏಕೆ ಹೀಗೆ ತುಳಿದಿಹೆ...
ಜನಿಸಿದ ನಾಡಿನಲ್ಲೇ ಏಕೆ ಜೀವನ ಕಟ್ಟಲಾಗದೆ..
ನಿನ್ನ ನೆಲೆಯ ಹಿಡಿದು...

ತನ್ನ ಆಕಾಂಕ್ಷೆಯಲ್ಲೇ ಜೀವನವ
ತೊರೆದರೆ ಅದಕೂ ನೆಲೆಯುಂಟೆನು...??


ದಿನ ಸಾಯುವವರಿಗೆ ಹೇಗೆ ಅಳಲಾಗದೋ..
ಹಾಗೆ.. ಅಪರೂಪದ ಅತಿಥಿಯ
ಆಗಮನವು.. ಜೀವನಕ್ಕಿಲ್ಲವೇನೋ.

ಕರ್ತವ್ಯ ಎಲ್ಲರಿಗೂ ಉಂಟು... ಜೀವನಕೇಕೆ ಎಲ್ಲ ಭಾರ....
ಅದು ನಿನ್ನ ನೆತ್ತರು ಅಲ್ಲ ವೆಂದೇನೋ..
ಜನನವು ಜೀವನದಲ್ಲಿ ವಿಪರ್ಯಾಸಕಂಡರೆ..
ಜೀವನದ ಮರ್ಮವಾದರೂ ಏನು.

ತಾ ಕಂಡ ಜನ್ಮವ ತಾನೇ ಖಂಡಿಸಿದರೇ..
ಜೀವನ ಕರ್ಮ ಖಾಂಡವೇ ಸರಿ..
ಜನ್ಮವು ಅಳುವಿನಿಂದ ಆಗಮನ..
ಜೀವನ ನಗುತಿರಲೆಂಬುದೇ ಎನ್ನ ಆಶಯ..

ವಿಶೂ....ಹ ಹ